ನನ್ನದೊಂದು ಕತೆಗೆ ನಿಮಗೆ ಸ್ವಾಗತ.ಈ ಕತೆ ನನ್ನ ಜೀವನದ ಗುರಿ ,ಉದ್ದೇಶ ಹಾಗೂ ನನ್ನ ಸಾಮರ್ಥ್ಯ ವನ್ನಾ ಕಡಿಮೆಮಾಡಲು ನನ್ನ ಒಳಗೆ ಇರುವ ಒಂದು ಶಕ್ತಿಶಾಲಿಯಂತೆ ಕಾಣುವ ದುರ್ಬಲ ರೋಗ (ಭಯ). ಅದು ನನ್ನನು ಹೇಗೆ ಭ್ರಮೆ ಹಾಗೂ ಭಯ,ಭೀತಿಗೆ ಒಳಪಡಿಸಿ ನನ್ನನು ಕುಗ್ಗಿಸಿ ನನ್ನಿಂದ ನನ್ನ ಸೋಲನ್ನು ಸ್ವೀಕರಿಸುವಂತೆ ಮಾಡಲು ಕಾತುರವಾಗಿತ್ತು.
ಆದರೆ ನಾನು ಅದನು ದೊಡ್ಡ ಯೋದ ಎಂದು ತಿಳಿದು ಅದರಿಂದ ತಪ್ಪಿಸಿ ಕೊಳ್ಳಲು ಓಡುತ್ತಲೇ ಇದೇ. ಅದು ನನಗೆ ಗೊತ್ತಾಗಲೆ ಇಲ್ಲ ಅದು ನನಗಿಂತ ದುರ್ಬಲ ಹಾಗೂ ನಿಶ್ಯಕ್ಹ್ತ, ಶಸ್ತ್ರಹೀನನಾದ ಒಂದು ಭ್ರಮೆ ಎಂದು ಆದರೆ ಮುಂದೆ ನನಗೆ ಅದನು ಎದುರಿಸಬೇಕಾದ ಸಂಧರ್ಭ ಬಂತು ಇಲ್ಲವೇ ನನ್ನ ಮೃತ್ಯುವನ್ನು ಸ್ವಿಕರಿಬೇಕಾಗಿ ಬಂತು . ನಾನು ಸಾವನು ಸ್ವೀಕರಿಸದೆ ಅದನು ಎದುರಿಸಲು ಸಿದ್ಧನಾದೆ.ಆಗ ನನ್ನಗೆ ತಿಳಿಯಿತು ಇದು ನನಗಿಂತ ದುರ್ಬಲ ಹಾಗೂ ಅಸಹಾಯಕ ಸ್ಥಿತಿಯಲ್ಲಿ ಇದೆ ಎಂದು ಏಕೆಂದರೆ ನಾನು ದೈರ್ಯ ದಿಂದ ಅದನು ಎದುರಿಸಲು ಹೊರಟಾಗ ಅದು ನನಗಿಂತ ಕ್ಷಿಣಿಸಿತು ಅದರಿಂದ ನಾವು ಯಾವಾಗಲೂ ನಮ್ಮ ಶಕ್ತಿ ಮತ್ತು ಬುದ್ಧಿಶಕ್ತಿಯನ್ನು ಉಪಯೋಗಿಸಿ ಕಾರ್ಯಪ್ರವೃತಿ ಆಗಬೇಕು ಆಗ ನಮ್ಮ ರೋಗ (ಭಯ) ನಮ್ಮಿಂದ ಸೋಲನ್ನು ಸ್ವೀಕರಿಸುತ್ತದೆ. ಆಗ ನಮ್ಮ ಯಶಸ್ಸು ಸುಲಭ ವಾಗುತ್ತದೆ.
No comments:
Post a Comment